ನನ್ನ ವಂಶ ! (ಕವನ)
ನನ್ನ ವಂಶ ! (ಕವನ)
Feb 22, 2025
ಕವಿ: ಉದಯಗೌರಿ
ರಾಮಾಯಾಣ ಓದಿ ತಿಳಿದೆ, ರಾಮ ಇಕ್ಷ್ವಾಕು ವಂಶಸ್ಥ !
ಮಹಾಭಾರತ ಓದಿ ತಿಳಿದೆ ಕೌರವ ಕುರು ವಂಶಸ್ಥ | |
ಆ ಕಾಲದಲ್ಲಿ ಇತ್ತು ಹೀಗೆ ಸೂರ್ಯವಂಶ ಚಂದ್ರವಂಶ | '
ನನ್ನಲ್ಲೊಂದು ಪ್ರಶ್ನೆ ಮೂಡಿತು ನಾನ್ಯಾವ ವಂಶ ?
ತಡಮಾಡಲಿಲ್ಲ ನಾನು,
ನನ್ನ ವಂಶದ ಮೂಲ ಹುಡುಕ ಹೊರಟೆ.
ಸಿಕ್ಕೇ ಬಿಡಬೇಕೇ ನನ್ನ ವಂಶದ ಸುಳಿವು |
ನೂರಕ್ಕೆ ನೂರು ಸತ್ಯ ಕಣ್ರಿ | ನನ್ನದು ಸೂರ್ಯವಂಶ |
ಹೇಗೆಂದು ಕೇಳಿದಿರಾ? '
ಮೂಡು ದಿಕ್ಕಿನಲ್ಲಿ ಸೂರ್ಯಮೂಡಿ ಅಷ್ಟು
ಮೇಲೇರಿ ಬಂದು ನನ್ನ ಕೊಠಡಿಯ ಕಿಂಡಿಯ
ಮೂಲಕ ಸೂರ್ಯ ಕಿರಣ ಸೋಕಿದ
ಮೇಲಲ್ಲವೇ ನಾನು ಏಳುವುದು
ನಾನು ಹಾಸಿಗೆಯಿಂದ
ಹಾಗಿದ್ದ ಮೇಲೆ ನಿಸ್ಸಂಶಯವಾಗಿ ಯೂ
ನಾನು ಸೂರ್ಯವಂಶಸ್ಥನಲ್ಲದೆ ಇನ್ನೇನು ?
ನನ್ನದು ಸೂರ್ಯವಂಶ !