ಕುರಿಯ ಆರ್‌. ಚಾಮಯ್ಯ, ಎಂ.ಎ., ಬಿ.ಎಲ್‌

ಕುರಿಯ ಆರ್‌. ಚಾಮಯ್ಯ, ಎಂ.ಎ., ಬಿ.ಎಲ್‌

Feb 21, 2025

ಆವರ ಕಿರು ಪರಿಚಯ


ಲೇಖಕರು : ಡಾ. ಪಡ್ಚಂಬೈಲು ಮುದ್ದಪ್ಪ ಗೌಡ



ಉದ್ಯೋಗ ನಿಮಿತ್ತ ಬೆ೦ಗಳೂರಿಗೆ ೧೯೫೦-೧೯೬೦ರ ದಶಕಗಳಲ್ಲಿ ಬಂದು ನೆಲೆಸಿದ ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಬಂಧುಗಳ ಪೈಕಿ ಮಾನ್ಯ ಕೆ.ಆರ್‌. ಜಾಮಯ್ಯನವರು ಒಬ್ಬರು.
ಕುರಿಯ ಶ್ರೀ ರುಕ್ಮಯ ಗೌಡರ ಮತ್ತು ಶ್ರೀಮತಿ ಉಮ್ಮಕ್ಕನವರ ಏಕಮಾತ್ರ ಪುತ್ರನಾಗಿ ದಿನಾಂಕ. ೦೮.೦೨.೧೯೩೦ರಲ್ಲಿ ಶ್ರೀ ಚಾಮಯ್ಯನವರ ಜನಿಸಿದರು.
ಇವರು ಪುತ್ತೂರು ಸರ್ಕಾರಿ ಹೈ ಸ್ಕೂಲಿನಲ್ಲಿ (ತಮ್ಮ ೧೬ನೇ ವರ್ಷ ಪ್ರಾಯದಲ್ಲಿ) ೧೯೪೬ರಲ್ಲಿ ಮೆಟ್ರಿಕುಲೇಶನ್‌ (ಎನ್‌.ಎಸ್‌.ಎಲ್‌.ಸಿ) ಪಾಸಾಗಿ, ಮಂಗಳೂರು ಸೈಂಟ್‌ ಅಲೋಶಿಯಸ್‌ ಕಾಲೇಜಿಗೆ ಸೇರಿ ಇಂಟರ್‌ ಮಿಡಿಯೇಟ್‌ ೧೯೪೮ರಲ್ಲಿ ಪಾಸಾದರು ಅನ೦ತರ ಅಲ್ಲೇ ಬಿ.ಎ. ಡಿಗ್ರಿಯನ್ನು ಮಾಡಿದರು. ಮುಂದೆ ಉದ್ಯೋಗ ನಿಮಿಕ್ತ ನ್ಯಾಯವಾದಿಯಾಗುವ ಬಯಕೆಯಿ೦ದ ಬೆಳಗಾವಿಯಲ್ಲಿ ಲಾ-ಕಾಲೇಜಿಗೆ ಸೇರಿದರು.
ಪರಿಸ್ಥಿತಿಯ ಒತ್ತಡದಿಂದ ೧೯೫೨ರಲ್ಲೇ ಕೋಡ್ತಿಲು ದಿ. ದೇವಪ್ಪ ಗೌಡರ ಮತ್ತು ಶ್ರೀಮತಿ ಅಮ್ಮ ತಾಯಿ ಇವರ ಎರಡನೆ ಪುತ್ರಿ ಚ೦ದ್ರಾವತಿಯವರನ್ನು ವಿವಾಹವಾದರು. ತಮ್ಮ ಎದ್ಯಾಭ್ಯಾಸವನ್ನು ಮುಗಿಸಲು ಅವರು ಪುನಃ ಬೆಳಗಾವಿಗೆ ಹೋಗಿ ಎ೦.ಎ. ಎಲ್‌.ಎಲ್‌.ಬಿ. ಡಿಗ್ರಿಗಳನ್ನು ಜತೆ ಜತೆಯಲ್ಲೇ ಕಲಿತು ಉತ್ತಮ ದರ್ಜೆಯಲ್ಲಿ ಉದ್ಯೋಗದ ತೇರ್ಗಡೆ ಹೊಂದಿದರು.
ಅನ೦ತರ ತಮ್ಮ ಊರಾದ ಪುತ್ತೂರಿನಲ್ಲೇ ಜನಪ್ರಿಯ ನ್ಯಾಯವಾದಿಯಾಗಿ ೧೯೫೪ರಿಂದ ೧೯೫೯ರ ವರೆಗೆ ಕೆಲಸಮಾಡಿದರು. ಜೀವನದಲ್ಲಿ ಹೆಚ್ಚಿನ ಸಾಧನೆ ಮಾಡುವ ಮಹತ್ವಾಕಾಂಕ್ಷೆಯಿಂದ ತಮ್ಮ ಪ್ರಯತ್ನ ಮುಂದುವರಿಸಿ ೧೯೬೦ರಲ್ಲಿ ಸರ್ಕಾರಿ ಮುನಿಸಿಪ್‌ ಆಗಿ ಗದಗದಲ್ಲಿ ತಮ್ಮ ಉದ್ಯೋಗವನ್ನು ಪ್ರಾರಂಭಿಸಿದರು. ಅಲ್ಲಿಂದ ೧೯೬೨ ರೋಣ ಎಂಬಲ್ಲಿಗೆ ವರ್ಗವಾಗಿ, ಪುನಃ ೧೯೬೩ರಲ್ಲಿ ಕೊಡಗಿನ ವಿರಾಜಪೇಟೆಗೆ ವರ್ಗವಾಯ್ತು. ೧೯೬೫ರಿಂದ ೧೯೬೪ರ ವರೆಗೆ ಬೆಂಗಳೂರಿನ ಸಿವಿಲ್‌ ಸ್ಟೇಷನ್‌ ಕೋರ್ಟಿನಲ್ಲಿ ತಮ್ಮ ಉದ್ಯೋಗವನ್ನು ಮುಂದುವರಿಸಿದರು.
ಶ್ರೀ ಚಾಮಯ್ಯನವರ ಕೆಲಸ ಮತ್ತು ನಿಷ್ಠೆಯನ್ನು ಗುರುತಿಸಿದ ಸರ್ಕಾರ ಅವರನ್ನು ಉನ್ನತವಾದ ಅಂಡರ್‌ ಸೆಕ್ರಿಟರಿಯಾಗಿ ಕಾನೂನು-ಇಲಾಖೆಯಲ್ಲಿ ನೇಮಿಸಿದರು. ಮುಂದೆ ಅವರು ಡ್ರಾಫ್ಟಸ್‌ ಮೇನ್‌ ಆಗಿ ಪ್ರೊಮೋಶನ್‌ ಪಡೆದರು. ೧೯೮೬ರಲ್ಲಿ ಶ್ರೀ ಚಾಮಯ್ಯನವರು ಲಾ-ಸೆಕ್ರೆಟರಿಯಾಗಿ ನೇಮಿಸಲ್ಪಟ್ಟರು. ನಮ್ಮ ದ.ಕ. ಗೌಡರ ಪೈಕಿ ಮೊದಲಿಗರಾಗಿ ಸರ್ಕಾರದ (ವಿಧಾನಸೌಧದಲ್ಲಿ) ಸೆಕೆಟರಿಯಾಗಿ ನೇಮಕಗೊಂಡುದು ನಮಗೆಲ್ಲರಿಗೆ ಹೆಮ್ಮೆಯ ವಿಚಾರವಾಯುತ್ತು.
ಶ್ರೀ ಚಾಮಯ್ಯನವರು ೧೯೯೬ರಲ್ಲಿ ನಿವೃತ್ತಿಯಾದ ಮೇಲೆ ಸರ್ಕಾರ ಅವರನ್ನು ೫ ವರ್ಷ ಕೆ.ಎ.ಟಿ. (ಕರ್ನಾಟಕ ಎಡ್ಡಿನಿಸ್ಟೇಟಿವ್‌ ಟ್ರಿಬೂನಲ್‌)ನಲ್ಲಿ ಸದಸ್ಯರಾಗಿಯು, ಮುಂಡೆ ಅದರಲ್ಲಿ ವೈಸ್‌ ಚೇರ್‌ಮೆನ್‌ರಾಗಿಯೂ ಮುಂದುವರಿಸಿತ್ತು.
ಶ್ರೀಯುತರನ್ನು ೨೦೧೧ರ ತನಕ ಕರ್ನಾಟಕ ಸರ್ಕಾರ ಏಕ ಸದಸ್ಯ ಸಮಿತಿಯವರನ್ನಾಗಿ ನೇಮಿಸಿ, ಕರ್ನಾಟಕ ಸರ್ಕಾರ ೧೯೫೬ರಲ್ಲಿ ರಚನೆಗೊಂಡ ನಂತರ ಮಾಡಿದ ಎಲ್ಲ ಶಾಸನಗಳನ್ನು ಕೂಲಂಕುಶವಾಗಿ ವಿಮರ್ಶಿಸಿ ಒಂದು ವರದಿಯನ್ನು ತಯಾರಿಸಲು ನೇಮಿಸಿತ್ತು. ಅದಲ್ಲದೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಕರ್ನಾಟಕಕ್ಕ ಸಂಬಂಧಿಸಿದ ಶಾಸನಗಳನ್ನೂ ವಿಮರ್ಶಿಸಿ ವರದಿ ತಯಾರಿಸುವ ಜವಾಬ್ದಾರಿಯನ್ನು ಕೊಟ್ಟಿತ್ತು. ಅನ್ತು ಶ್ರೀ ಚಾಮಯ್ಯನವರು ತಮ್ಮ ೮೧ ವರ್ಷ ಪ್ರಾಯದವರೆಗೂ ತಮ್ಮ ನ್ಯಾಯಾಧೀಶ ಸೇವೆಯನ್ನು ಮಾಡಿ ಈಗಲೂ ಆರೋಗ್ಯವಂತರಾಗಿ ಸಮಾಜಕ್ಕೆ ಉಪಯೋಗವಾಗುವ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ನಮಗೆಲ್ಲ ತುಂಬಾ ಸಂತಸದ ವಿಚಾರ. ಇನ್ನು ಮುಂದೆಯು ಅವರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಹೆಚ್ಚೆಚ್ಚು ಸಮಾಜಕ್ಕೆ ಅಗತ್ಯವಾದ ಹಲವಾರು ಕ್ಷೇತ್ರಗಳಲ್ಲಿ ಸೇವಾಸಕ್ತರಾಗಿರಲಿ ಎಂದು ಹಾರೈಸೋಣ