ಹೀಗೊಂದು ನಮನ  ಲೇಖಕರು :ನಾಗವೇಣಿ ಎಸ್‌.ಕೆ. ಶಾಖಾಧಿಕಾರಿ, ಆರ್ಥಿಕ ಇಲಾಖೆ

ಹೀಗೊಂದು ನಮನ  ಲೇಖಕರು :ನಾಗವೇಣಿ ಎಸ್‌.ಕೆ. ಶಾಖಾಧಿಕಾರಿ, ಆರ್ಥಿಕ ಇಲಾಖೆ

Mar 03, 2025

ಅಂದು ನನ್ನ ನಾಲ್ಕನೇ ತರಗತಿಯ ತಂಗಿಗೆ ಸಮಾಜಶಾಸ್ತ್ರದ ಪಾಠವೂಂದನ್ನು ಹೇಳಿ ಕೊಡುತ್ತಿದ್ದೆ. ಅದರಲ್ಲಿ ವಿಧಾನಸೌಧದ ಬಗ್ಗೆ ಪ್ರಸ್ತಾಪ, ವಿವರಣೆಯತ್ತು “ವಿಧಾನ ಸೌಧ” ಎಂಬ ಆ ಪದವೇ ನನ್ನನ್ನು ಪುಳಕಿತ ಗೊಳಿಸಿತ್ತು. “ವಿಧಾನ ಸೌದ”ದ ವರ್ಣನೆಯನ್ನು ಓದುತ್ತಿದ್ದಂತೆ ಅದನ್ನೊಮ್ಮೆ ನೋಡಬೇಕು, ಹೇಗಿರಬಹುದು ಆ ಸೌಧ ಎಂಬ ಕುತೂಹಲವಿತ್ತು. ಜತೆಗೆ ಇದೆಲ್ಲ ಹೇಗೆ ಸಾಧ್ಯ ಎಂಬ ಭಾವನೆಯು ಮನದೂಳಗೆ ಇಣುಕಿತ್ತು. “ಎಧಾನಸೌಧ”ವನ್ನು ನೋಡುವುದು ಕನಸಿನಮಾತೇ ಎಂದೆನಿಸಿತ್ತು.


ಆದರೆ ನನ್ನ ಜನ್ಮದಾತರು ನನಗೆ ನೀಡಿದ ಅಮೂಲ್ಯವಾದ ಆಸ್ತಿ ತಕ್ಕಮಟ್ಟನ ವಿದ್ಯೆ “The secret of education is lies in respecting the people” ಮಾನವನ ಬಾಳಿಗೆ ವಿದ್ಯೆಯಿಂದಲೇ ನಿಜವಾದ ಸೊಗಸು ಎಂಬುದರ ಅರಿವಿತ್ತು ಅವರಿಗೆ. ಆದ್ದರಿಂದ ವಿದ್ಯೆಯ ಜತೆಗೆ ವಿವೇಕ ಸಂಸ್ಕಾರವನ್ನು ಮಾತ್ರವಲ್ಲದೆ ಯಾರೇ ಆಗಲಿ ಕಲಿತ ವಿದೈೆಯನ್ನು ಸಮಾಜದ ಕ್ಷೇಮಕ್ಕಾಗಿ ವಿನಿಯೋಗಿಸ ಬೇಕಾಗಿರುವ ಔದಾರ್ಯತೆಯ ಬಗ್ಗೆಯೂ ನನ್ನಲ್ಲಿ ಅರಿವು ಮೂಡಿಸಿದ್ದಾರೆ. “"Money comes and goes but morality comes and grows.” ನಾವು ಕಲಿತ ವಿದ್ಯೆಗೆ ಬೆಲೆ ಬರುವುದು ನಮ್ಮ ಉತ್ತಮ ನಡವಳಿಕೆಯಿಂದ ಎಂಬುದು ಜನಜನಿತವಲ್ಲವೆ.) ವಿದ್ಯೆಯಿಂದ ದುಡ್ಡು ಸಂಪಾದನೆ ಮಾಡುವುದೊಂದೇ ನಮ್ಮ ಜೀವನದ ಗುರಿಯಲ್ಲವೆಂಬುದನ್ನು ನನಗೆ ಮನದಟ್ಟು ಮಾಡಿದ್ದಾರೆ.
ಆ ನನ್ನ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ೧೯೮೪ರಲ್ಲಿ ನಾನು "ಶೀಘ್ರಲಿಪಿಗಾರ್ತಿ'ಯಾಗಿ ಕರ್ನಾಟಕ ಸರ್ಕಾರ ಸಚಿವಾಲಯ-“ವಿಧಾನಸೌಧ”ದಲ್ಲಿ ನೇಮಕಗೊಂಡೆ. ತಂಗಿಗೆ ಪಾಠ ಹೇಳಿಕೊಟ್ಟ ಹಳೆಯ ನೆನಪು ಮರುಕಳಿಸಿ, ಕನಸು ನನಸಾಯಿತೆಂಬ ಧನ್ಯತಾ ಭಾವದೊಂದಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ದೂರದ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಆಗಮಸಿದೆ. ವಿಧಾನಸೌಧವನ್ನು ಕಂಡೊಡನೆ ಆ ಭಗವಂತನನ್ನು ನೆನೆದು ಕೈಮುಗಿದು ನನ್ನ ಜನ್ಮದಾತ ರೊಂದಿಗೆ ಒಳಪ್ರವೇಶಿಸಿದ್ದೆ. ನನ್ನ ಕನಸಿನ ಭವ್ಯ ಮಂದಿರ “ವಿಧಾನ ಸೌಧ” ದೊಳಗೆ ಅಡಿಯಿರಿಸಿದಾಗ ರೋಮಾಂಚನ ಗೊಂಡಿದ್ದೆ. ಈ ಸುಂದರ ಮಂದಿರದೊಳಗಿನ ಸಂಪುಟ ಸಭಾಂಗಣ, ವಿಧಾನಸಭೆ, ಪರಿಷತ್ತುಗಳು ಕಲಾಪ ನಡೆಸುವ ಸ್ಥಳ, ಮಾನ್ಯ ಮುಖ್ಯಮಂತ್ರಿಯವರನ್ನು ಒಳಗೂಂಡಂತೆ ಇತರೆ ಮಂತ್ರಿಗಳ ಕೊಠಡಿಗಳು, ದೊಡ್ಡ ದೊಡ್ಡ ಸಭೆ-ಸಮಾರಂಭಗಳು ಜರುಗುವ ಸಭಾಂಗಣಗಳು, ಪ್ರತಿಯೊಂದು ಮಹಡಿಯ ಮೇಲ್ಬಾವಣಿಯಲ್ಲಿ ಮನಸ್ಸಿಗೆ ಮುದನೀಡುವ ವಿಧ ವಿಧವಾದ, ಬಣ್ಣ ಬಣ್ಣದ ಚಿತ್ತಾರದ ಸೌಂದರ್ಯವನ್ನು ಕಂಡು ನಾವೆಲ್ಲ ನಿಜಕ್ಕೂ ಮೂಕವಿಸ್ಥಿತರಾಗಿದ್ದೆವು. ಇದರ ನಿರ್ಮಾತೃ ಶ್ರೀ ಕೆಂಗಲ್‌ ಹನುಮಂತಯ್ಯನವರ ಕಲ್ಪನಾ ಚಾತುರ್ಯಕ್ಕೆ ಮನದಲ್ಲೇ ಅಭಿನಂದಿಸಿದ್ದೆವು.


ಸೇವೆಗೆ ಸೇರಿದ ಬಳಿಕ ನನ್ನ ಸಂಬಂಧಿಕರು ಹಾಗೂ ನನ್ನ ಊರಿನ ಜನರು ಯಾವುದಾದರು ಕಾರ್ಯನಿಮಿತ್ತ ಅಥವಾ ಪವಾಸಿಗರಾಗಿ ವಿಧಾನ ಸೌಧಕ್ಕೆ ಭೇಟಿ ನೀಡಿದಾಗ ವಿಧಾನಸೌಧದ ಅಂದವನ್ನು ಅವರೂಂದಿಗೆ ವರ್ಣಿಸುತ್ತಾ ನೋಡಿ ಆನಂದಿಸಲು ಬಹಳ ಹೆಮ್ಮೆಯೆನಿಸುತ್ತದೆ. ಅವರೆಲ್ಲ ಇದೊಂದು ಅದ್ಧ್ಭುತವೆಂದು'ಹೊಗಳಿ ಮೂಗಿನ ಮೇಲೆ ಬೆರಳಿಟ್ಟಾಗ, ಇಲ್ಲಿ ಕಾರ್ಯ ನಿರ್ವಹಿಸುವವರು ಎಂತಹಾ ಪುಣ್ಯವಂತರೆಂದು ಕೊಂಡಾಡಿದಾಗ, ನನ್ನನ್ನು ಎಲ್ಲಿ ಅಹಂ ಆವರಿಸುತ್ತದೆಯೋ ಎಂಬ ಭಯ ಕಾಡುತ್ತದೆ.


ಈ ಪವಿತ್ರ ಸೌಧದೂಳಗೆ ಜೀವನೋಪಾಯಕ್ಕಾಗಿ ಸೇವೆ ಸಲ್ಲಿಸುವ, ಕರ್ತವ್ಯ ನಿರ್ವಹಿಸುವ ಸುಯೋಗ, ಸಾವಿರಾರು ವ್ಯಕ್ತಿಗಳೊಂದಿನ ಸೌಹಾರ್ದಯುತ ಒಡನಾಟ, ಎಲ್ಲರೂ ತೋರುವ ಪ್ರೀತಿ-ವಿಶ್ವಾಸ, ಸಾರ್ವಜನಿಕರಿಗೆ ಸಹಾಯ ಮಾಡುವ ಸದವಕಾಶವನ್ನು ಭಗವಂತನು ನನಗೆ ಕರುಣಿಸಿದ್ದನ್ನು ನೆನಸಿಕೊಂಡಾಗ ನನ್ನಿಂದ ಸಾಧ್ಯಾವಾದಷ್ಟು ಮಟ್ಟಗೆ ಲೋಪವಾಗಬಾರದೆಂದು ಆದಷ್ಟು ಪ್ರಾಮಾಣಿಕವಾಗಿ, ನಿಸ್ಸೃಹತೆಯಿಂದ, ನಿಷ್ಠೆಯಿಂದ ಕರ್ತವ್ಯ ಪಾಲಿಸಲು ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ. "Why are we here? To help each other. Help as many as you can to lift the load on the rough road of life. He who helps others is helped by god.” ಆದಾಗ್ಯೂ “ಹರಿಹರ ಬ್ರಹ್ಮಾಪಿ ನರಂ ನ ರಂಜಯತಿ” - ಹರಿಹರ ಬ್ರಹ್ಮರಿಂದಲೂ ನರರನ್ನು ಸಂತಸಪಡಿಸಲು ಸಾಧ್ಯವಿಲ್ಲವೆಂಬ ಮಾತು ಜ್ಞಾಪಕವಾಗುತ್ತದೆ. ಆದರೆ ಬದುಕಿಗೊಂದು ಬಯಕೆ- ಆ ಬಯಕೆಗೊಂದು ಪ್ರಯತ್ನ ನನ್ನದಾಗಿದೆ. ಯಶಸ್ಸಿನ ಮೂಲ "ಉತ್ಸಾಹ' ಎಂಬುದನ್ನು ಯಾವತ್ತೂ ಮರೆಯಬಾರದಲ್ಲವೆ.? “ಶ್ರದ್ಧೆಯಿದ್ದರೆ ನೀ ಗೆದ್ದೆ, ಶ್ರದ್ಧೆಯೇ ಜೀವನದ ಗದ್ದೆ” ಹಾಗಾಗಿ, ನಾವು ಮಾಡುವ ಕಾರ್ಯದಲ್ಲಿ ಪ್ರಾಮಾಣಿಕತೆ, ಶ್ರದ್ಧೆಯಿದ್ದರೆ ಖಂಡಿತವಾಗಿಯೂ ಕಾರ್ಯ ಫಲಿಸುತ್ತದೆ. Life is beauty for those who perform their duty”. ಸ್ವಪ್ರಯೋಜನ ಆಸೆ ಇಟ್ಟುಕೊಳ್ಳದೆ ನಮಗೆ ಯಾವುದೇ ಸಹಾಯವನ್ನು ಮಾಡದವರಿಗೂ ಸಹಾಯ ಹಸ್ತ ನೀಡುವುದನ್ನು "ಸೇವೆ' ಎಂದರಿತು ಕರ್ತವ್ಯ ನಿರ್ವಹಿಸಲು ತುಂಬಾ ಹೆಮ್ಮೆಯೆನಿಸುತ್ತದೆ. ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ಸಮಾಜದಲ್ಲಿ ಗೌರವ, ಮನ್ನಣೆಗಳನ್ನು ತಾನಾಗಿಯೇ ಪಡೆಯಬಹುದು ಎಂಬುದು ನಿರ್ವಿವಾದ.


ನಮ್ಮ ಜೀವಮಾನದ ಸರಾಸರಿ ಅರ್ಧ ಆಯುಷ್ಯವನ್ನು ಸಾರ್ವಜನಿಕ ಸೇವೆಯಲ್ಲಿ ವ್ಯಯಿಸಬೇಕಾದ ಅನಿವಾರ್ಯತೆಯಲ್ಲಿ ಎಷ್ಟೊಂದು ಹಿರಿ-ಕಿರಿಯ ಅಧಿಕಾರಿಗಳೊಂದಿಗೆ, ಸಹೋದ್ಯೋಗಿಗಳೊಂದಿಗೆ, ಸಾರ್ವಜನಿಕರೂಂದಿಗೆ ಸಂಪರ್ಕದಲ್ಲಿರಬೇಕಾಗುತ್ತದೆ. ಎಂಬುದೂ ಬಹಳ ಪ್ರಾಮುಖ್ಯವಾದ ಸಂಗತಿಯಾಗಿದೆ. ಸಾಕಷ್ಟು ಸಂತಸಪಡುವ ಅಂತೆಯೇ ನೋವನ್ನು ಉಣಬಡಿಸುವ ನನ್ನ ಸೇವಾವದಿಯಲ್ಲಿ ನನ್ನ ಜತೆಯಲ್ಲಿ ಕರ್ತವ್ಯ ನಿರ್ವಹಿಸುವ ಸಹೋದ್ಯೋಗಿಗಳನ್ನು ಕಳೆದುಕೊಂಡಾಗ ಕಾಡುವಂತಹ ಆ ವೇದನೆಯನ್ನು ಹೇಗೆ ತಾನೆ ಮರೆಯಲು ಸಾಧ್ಯವಾದೀತ್ರು


ನಮ್ಮ ಜೀವನದಲ್ಲಿ ಎರಡು ವಿಷಯಗಳನ್ನು ನಾವು ಮರೆಯಬಾರದು. ಮೊದಲನೆಯದಾಗಿ ನಮಗೆಲ್ಲಾ ಅವಕಾಶ-ಸೌಲಭ್ಯಗಳನ್ನು ಕರುಣಿಸಿದ ಆ ದೇವರು ಹಾಗೂ ಎರಡನೆಯದಾಗಿ ಅವೆಲ್ಲವನ್ನೂ ತೊರೆದು ಹೋಗಬೇಕದ ಈ ಭೌತ ಶರೀರ, ಅದೇ ಸಾವು. ಬದುಕಿನಲ್ಲಿ ಮರೆಯಲೇ ಬೇಕಾದ ಸಂಗತಿಯೆಂದರೆ ಇತರರಿಗೆ ನಾವು ಮಾಡಿದ ಒಳಿತು ಹಾಗೂ ಇತರರು ನಮಗೆ ಮಾಡಿದ ಕೆಡುಕು. ಇವನ್ನು ನೆನಪಿಸಿಕೊಂಡರೆ ಇದು ನಮ್ಮ ಜೀವನದ ನೆಮ್ಮದಿಯನ್ನು ಖಂಡಿತವಾಗಿಯೂ ಹಾಳುಮಾಡುತ್ತವೆ. ಒಂದು ಮಾತಿದೆ. ಉತ್ತಮ ನಡೆವಳಿಕೆಗಳಿಂದ : ತಂದೆಯನ್ನು ಸಂತೋಷಪಡಿಸುವವನೇ ನಿಜವಾದ ಮಗ. ಗಂಡನಿಗೆ ಹಿತವನ್ನೇ ಬಯಸುವವಳು ನಿಜವಾದ ಹೆಂಡತಿ. ಆಪತ್ತಿಗೆ ಸಿಲುಕಿದಾಗಲೂ ಸುಖವಾಗಿ ಇರುವಾಗಲೂ ಸಮಾನವಾಗಿ ನಡೆದುಕೊಳ್ಳುವವನೇ ನಿಜವಾದ ಸ್ನೇಹಿತ. ಜಗತ್ತಿನಲ್ಲಿ ಈ ಮೂರನ್ನು ಅದೃಷ್ಟವಂತರು ಮಾತ್ರ ಪಡೆಯುತ್ತಾರೆ ಎಂದಿದೆ. ಹೌದು; ನನ್ನ ಅದೃಷ್ಟ ನನಗೆ ಪ್ರಾಣಕ್ಕೆ ಪ್ರಾಣ ನೀಡುವ ಆತ್ಮೀಯರು, ಸಹೋದ್ಯೋಗಿಗಳು ಹಾಗೂ ಸ್ನೇಹಿತೆಯರಿದ್ದಾರೆ. ಅವರ ಖುಣವನ್ನು ಈ ಜನ್ಮದಲ್ಲಿ ತೀರಿಸಲು ಅಸಾಧ್ಯ ಆದ್ದರಿಂದ ಅವರೆಲ್ಲರಿಗೆ ನಾನು ಜನ್ಮ ಜನ್ಮಾಂತರದಲ್ಲೂ ಚಿರಖಣಿಯೆಂದು ಈ ಲೇಖನದ ಮುಖೇನ ನನ್ನ ಮನದಾಳದಿಂದ ಅಬಿನಂದನೆಗಳನ್ನು ಸಲ್ಲಿಸುತ್ತೇನೆ.


ಒಟ್ಟಿನಲ್ಲಿ ನನ್ನ ಕನಸನ್ನು ನನಸಾಗಿಸಿ, ಬದುಕಿಗೊಂದು ಸುಂದರ ನೆಲೆ ನೀಡಿ, ಜೀವನವನ್ನು ರೂಪಿಸಿದ ಈ ಪವಿತ್ರ ತಾಣ “ವಿಧಾನಸೌಧ” ವೆಂಬ ಭವ್ಯ ಮಂದಿರಕ್ಕೆ ನಾನು ಸದಾ ಕೃತಜ್ಞಳಾಗಿರಬೇಕಾದುದು ನನ್ನ ಧರ್ಮ. ಈ ಜನುಮದಲ್ಲಿ ಸಮಾಜವು ನನ್ನನ್ನು ಗುರುತಿಸುವಂತಾಗಲು ಕಾರಣವಾಗಿರುವ ಆ ಅಗೋಚರ ಶಕ್ತಿಗೆ ಹಾಗೂ ನನ್ನನ್ನು ಈ ಹಂತಕ್ಕೆ ಕೊಂಡೊಯ್ಯಲು ಕಾರಣೀಭೂತರಾಗಿರುವ ನನ್ನ ಗುರು-ಹಿರಿಯ-ಪೂರ್ವದರಿಗೆ ಮತ್ತು ನನಗೆ ವಿದ್ಯೆ-ವಿವೇಕ-ಸಂಸ್ಕಾರಗಳ ಕೊಡುಗೆಗಳನ್ನಿತ್ತು ಆಶೀರ್ವದಿಸಿದ ನನ್ನ ಜನ್ಮದಾತರಿಗೆ ನನ್ನ ಹೃದಯಾಂತರಾಳದಿಂದ ಹೀ...ಗೊಂ..ದು ನಮನ. "